ಬುಧವಾರ, ಜುಲೈ 20, 2011

ಅತ್ತ ಮಳೆ ಅಬ್ಬರ, ಇತ್ತ ವರುಣ ಬರ !

ಫಾಲಲೋಚನ ಆರಾಧ್ಯ ಚಾಮರಾಜನಗರ
ಅತ್ತ ಕೊಡಗು, ಕರಾವಳಿ  ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಇತ್ತ ಗಡಿ ಜಿಲ್ಲೆಯಲ್ಲಿ   ವರುಣನ ಅವಕೃಪೆಯಿಂದ ರೈತರು ಬೆಳೆ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಹಾಗೆ ನೋಡಿದರೆ ಮುಂಗಾರು, ಇಡೀ ರಾಜ್ಯದಲ್ಲಿ ಮೊದಲು ಆರಂಭವಾಗುವುದು ಚಾಮರಾಜನಗರ ಜಿಲ್ಲೆಯಿಂದ. ಆರಂಭದಲ್ಲಿ ಉತ್ತಮವಾಗಿದ್ದ ಮುಂಗಾರು ಈಚೆಗೆ ಕ್ಷೀಣಿಸಿದ್ದು, ರೈತರಲ್ಲಿ ಚಿಂತೆಯ ಗೆರೆ ಮೂಡಿದೆ. ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿಯೇ ಹೆಚ್ಚು. ಆರಂಭದಲ್ಲಿ ಬಂದ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರು, ಇದೀಗ ಆಕಾಶದತ್ತ ಮುಖ ಮಾಡಿದ್ದಾರೆ.  ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ  ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ರೈತನ ಕೈ ಹಿಡಿಯಬೇಕಿದ್ದ ಜೋಳ, ಸೂರ್ಯಕಾಂತಿ ಒಣಗಲಾರಂಭಿಸಿದೆ. ರೈತರು ಚಿಂತಾಕ್ರಾಂತರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ