ಬುಧವಾರ, ಜುಲೈ 20, 2011

ಅತ್ತ ಮಳೆ ಅಬ್ಬರ, ಇತ್ತ ವರುಣ ಬರ !

ಫಾಲಲೋಚನ ಆರಾಧ್ಯ ಚಾಮರಾಜನಗರ
ಅತ್ತ ಕೊಡಗು, ಕರಾವಳಿ  ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಇತ್ತ ಗಡಿ ಜಿಲ್ಲೆಯಲ್ಲಿ   ವರುಣನ ಅವಕೃಪೆಯಿಂದ ರೈತರು ಬೆಳೆ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಹಾಗೆ ನೋಡಿದರೆ ಮುಂಗಾರು, ಇಡೀ ರಾಜ್ಯದಲ್ಲಿ ಮೊದಲು ಆರಂಭವಾಗುವುದು ಚಾಮರಾಜನಗರ ಜಿಲ್ಲೆಯಿಂದ. ಆರಂಭದಲ್ಲಿ ಉತ್ತಮವಾಗಿದ್ದ ಮುಂಗಾರು ಈಚೆಗೆ ಕ್ಷೀಣಿಸಿದ್ದು, ರೈತರಲ್ಲಿ ಚಿಂತೆಯ ಗೆರೆ ಮೂಡಿದೆ. ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿಯೇ ಹೆಚ್ಚು. ಆರಂಭದಲ್ಲಿ ಬಂದ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರು, ಇದೀಗ ಆಕಾಶದತ್ತ ಮುಖ ಮಾಡಿದ್ದಾರೆ.  ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ  ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ರೈತನ ಕೈ ಹಿಡಿಯಬೇಕಿದ್ದ ಜೋಳ, ಸೂರ್ಯಕಾಂತಿ ಒಣಗಲಾರಂಭಿಸಿದೆ. ರೈತರು ಚಿಂತಾಕ್ರಾಂತರಾಗಿದ್ದಾರೆ.

ಗುರುವಾರ, ಜುಲೈ 14, 2011

ಇಂಗ್ಲಿಷ್ ಅನಿವಾರ್ಯ, ಮಾಧ್ಯಮವಾಗಲ್ಲ

ಫಾಲಲೋಚನ ಆರಾಧ್ಯ ಚಾಮರಾಜನಗರ
ಆರನೇ ತರಗತಿಯಿಂದ ಹೋಬಳಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆ  ತೆರೆಯಲು ಸರಕಾರ ಮುಂದಾಗಿದೆ. ಸರಕಾರದ ಈ ನಿರ್ಧಾರಕ್ಕೆ ರಾಜ್ಯಾದ್ಯಂತ ಪರ, ವಿರೋಧ ವ್ಯಕ್ತವಾಗುತ್ತಿದೆ. ಸಾಹಿತ್ಯ  ವಲಯದಲ್ಲಂತೂ  ಆಂಗ್ಲ  ಮಾಧ್ಯಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತದಲ್ಲಿ ಇಂಗ್ಲಿಷ್ ಒಂದು ಭಾಷೆಯಾಗಿರಲಿ, ಅದನ್ನೇ ಒಂದು ಮಾಧ್ಯಮವನ್ನಾಗಿ ಮಾಡುವುದು ಸರಿಯಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಮವಾರ, ಜುಲೈ 11, 2011

ದ್ವೀಪ ಗ್ರಾಮಕ್ಕೆ ಸೇತುವೆ ಮರೀಚಿಕೆ


 ವಿಕ ವಿಶೇಷ ಕೊಳ್ಳೇಗಾಲ
ಮಳೆಗಾಲ ಆರಂಭವಾದರೆ ಮಾತ್ರ ಜಿಲ್ಲಾಡಳಿತಕ್ಕೆ ದ್ವೀಪ ಗ್ರಾಮ ಯಡಿಕುರಿಯ ನೆನಪಾಗುತ್ತದೆ.
ಕಾವೇರಿ ನದಿಯಿಂದ ದ್ವೀಪವಾಗಿ ಮಾರ್ಪಟ್ಟಿರುವ ಗ್ರಾಮ ಇಲ್ಲಿಯ ತನಕ ಮರೆತುಹೋಗಿತ್ತು. ಈಗ ನೆನಪಿಗೆ ಬರುತ್ತಿದೆ. ಮುಂಗಾರು ಮಳೆ ಆರಂಭವಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹದ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

ಬುಧವಾರ, ಜುಲೈ 6, 2011


ಬಿಳಿಗಿರಿರಂಗನ ಬೆಟ್ಟದ ನಿವಾಸಿಗಳ ಗೋಳು ಅರಣ್ಯರೋದನ

ಡಿ.ಪಿ. ಶಂಕರ್ ಯಳಂದೂರು
ಒಂದೆಡೆ ದುಡಿದರೂ ಹಣವಿಲ್ಲ... ಮತ್ತೊಂದೆಡೆ ತಮ್ಮೂರಿಗೆ ಮೂಲ ಸೌಲಭ್ಯವಿಲ್ಲ... ಇದೆಲ್ಲದರ ನಡುವೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ನೀಡಿದ ಆಶ್ವಾಸನೆಗಳು ಇಂದಿಗೂ ಈಡೇರಿಲ್ಲ. ಪರಿಣಾಮ ಗಿರಿಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಇದು ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತಲ ಸುಮಾರು ೧೦ ಹಾಡಿಗಳ ಗಿರಿಜನರ ಪಾಡು. ಇಲ್ಲಿನ ಮಂದಿ ಅಕ್ಷರಶಃ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಹೋದ ಆಡಳಿತ ವರ್ಗ ಮತ್ತೆ ಇತ್ತ ತಿರುಗಿಯೂ ನೋಡದೇ ಇರುವುದು ಗಿರಿಜನರಲ್ಲಿ ತೀವ್ರ ಹತಾಷೆ ಮೂಡಿಸಿದೆ. ಈ ಹಾಡಿಗಳ ಗಿರಿಜನರ ಗೋಳು ಅರಣ್ಯರೋದನ.